Featured Posts
Unordered List
ವಿಜ್ಞಾನ ರಸಪ್ರಶ್ನೆ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ವಿಜ್ಞಾನ ರಸಪ್ರಶ್ನೆ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಧಾತುಗಳ ಆವರ್ತನೀಯ ವರ್ಗೀಕರಣ
ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತವಾದ ಪದಗಳಿಂದ ಬಿಟ್ಟಸ್ಥಳಗಳನ್ನು ತುಂಬಿರಿ.
ಸೂಚನೆ : ಖಾಲಿ ಸ್ಥಳದ ಮೇಲೆ ಕ್ಲಿಕ್ ಮಾಡಿದಾಗ ಡ್ರಾಪ್ ದೌನ್ ಬಾಕ್ಸ್ ಓಪನ್ ಆಗುತ್ತೆ ಅದರಲ್ಲಿರುವ ಸರಿಯಾದ ುತ್ತರದ ಮೇಲೆ ಕ್ಲಿಕ್ ಮಾಡಿ. )
ಬೆಳಕು, ಪ್ರತಿಫಲನ ಮತ್ತು ವಕ್ರೀಭವನ ರಸಪ್ರಶ್ನೆ.
ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
( ಸೂಚನೆ : ನೀವು ಪ್ರತಿ ಸಾರಿ 5 ಪ್ರಶ್ನೆ ಗಳಿಗೆ ಸರಿಯಾಗಿ ಉತ್ತರಿಸಿದ ನ೦ತರ ಮತ್ತೆ ಪ್ರಯತ್ನಿಸಿ. ಮುಂದಿನ ಪ್ರಶ್ನೆ ಗಳು ಬರುತ್ತವೆ)
ಕಾರ್ಬನ್ ಮತ್ತು ಅದರ ಸಂಯುಕ್ತಗಳು
ಕಾರ್ಬನ್ ಮತ್ತು ಅದರ ಸಂಯುಕ್ತಗಳು
Quiz
- ಅಲ್ಕೈನ್ ನ ಮೊದಲ ಸದಸ್ಯ
- ಮಿಥೈನ್
- ಈಥೈನ್
- ಪ್ರೋಪೈನ್
- ಬ್ಯುಟೈನ್
- ಇವುಗಳಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ ಗೆ ಒಂದು ಉದಾಹರಣೆ
- C2H6
- C2H4
- C3H4
- C3H4
- ಅನುರೂಪ ಶ್ರೇಣಿಯಲ್ಲಿರುವ ಮೂರು ಕಾರ್ಬನ್ ಸಂಯುಕ್ತಗಳ ಅಣುಸೂತ್ರಗಳು C2H5, C3H8 , C4 H10 ಆಗಿವೆ. ಈ ಸಂಯುಕ್ತಗಳಿಗೆ ಸೂಕ್ತವಾದ ಸಾಮಾನ್ಯ ಅಣುಸೂತ್ರ
- CnH2n + 2
- CnH2n - 1
- CnH2n-2
- CnH2n
- ಕಾರ್ಬನ್ ಸಂಯುಕ್ತಗಳನ್ನು ಹೆಚ್ಚಾಗಿ ಇಂಧನವಾಗಿ ಉಪಯೋಗಿಸುತ್ತಾರೆ. ಏಕೆಂದರೆ,
- ಅಪಾರ ಪ್ರಮಾಣದ ಶಾಖ ಮತ್ತು ಬೆಳಕನ್ನು ಬಿಡುಗಡೆ ಮಾಡುತ್ತವೆ.
- ಸಾಮಾನ್ಯವಾಗಿ ಸ್ವಚ್ಛ ಜ್ವಾಲೆಯನ್ನು ಕೊಡುತ್ತವೆ.
- ಆಕ್ಸಿಜನ್ ಉಪಸ್ಥಿತಿಯಲ್ಲಿ ಸಂಪೂರ್ಣ ದಹನವಾಗುವುದರಿಂದ ಕಡಿಮೆ ಮಲೀನಕಾರಿ.
- ಮೇಲಿನ ಎಲ್ಲವೂ
- ಈ ಕೆಳಗಿನ ಯಾವ ಹೈಡ್ರೋಕಾರ್ಬನ್ ಗಳು ಸಂಕಲನ ಕ್ರಿಯೆಗಳಿಗೆ ಒಳಗಾಗುತ್ತವೆ. C2H6, C3H8, C3H6, C2H2, CH4
- CH4 & C2H6
- C3H6 & C2H2
- C3H8 & C2H6
- C2H2 & CH4
- ಮೂರು ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಅಲ್ಕೋಹಾಲ್ ಮತ್ತು ಅಲ್ಡಿಹೈಡ್ ಗಳ ಸದಸ್ಯರ ಹೆಸರುಗಳು ಕ್ರಮವಾಗಿ
- ಪ್ರೋಪೇನಾಲ್ & ಪ್ರೋಪೇನೋನ್
- ಪ್ರೋಪೆನೋಯಿಕ್ ಆಮ್ಲ & ಪ್ರೋಪೇನ್ಯಾಲ್
- ಪ್ರೋಪೇನಾಲ್ & ಪ್ರೋಪೇನ್ಯಾಲ್
- ಪ್ರೋಪೆನೋಯಿಕ್ ಆಮ್ಲ & ಪ್ರೋಪೇನೋನ್
- ಈ ಕೆಳಗಿನ ಯಾವುದನ್ನು ಜೌಗು ಅನಿಲ ಎನ್ನುವರು.
- ಈಥೇನ್
- ಮಿಥೇನ್
- ಪ್ರೋಪೇನ್
- ಬ್ಯುಟೇನ್
- ಸಂಕಲನ ಕ್ರಿಯೆಯಲ್ಲಿ ಉಪಯೋಗಿಸುವ ಕ್ರಿಯಾವರ್ಧಕ.
- ನಿಕ್ಕಲ್
- ಕ್ರೋಮಿಯಂ
- ಪೋಟ್ಯಾಷಿಯಂ
- ಸತು
- ಒಂದು ಪ್ರಕಾರದ ಪರಮಾಣುಗಳನ್ನು ಇನ್ನೊಂದರ ಸ್ಥಾನವನ್ನು ಪಲ್ಲಟಗೊಳಿಸುವ ಕ್ರಿಯೆಗೆ ಹೀಗೆನ್ನುವರು.
- ಸಂಕಲನ ಕ್ರಿಯೆ
- ಆದೇಶನ ಕ್ರಿಯೆ
- ಕೆಟೆನೀಕರಣ
- ಸಾಬೂನೀಕರಣ
- ಒಂದೇ ಕ್ರಿಯಾಗುಂಪು ಕಾರ್ಬನ್ ಸರಪಳಿಯಲ್ಲಿನ ಹೈಡ್ರೋಜನ್ ನ್ನು ಸ್ಥಾನಪಲ್ಲಟಗೊಳಿಸುವ ಸಂಯುಕ್ತಗಳ ಸರಪಳಿಗೆ ಹೀಗೆನ್ನುವರು.
- ಕೆಟೇನಿಕರಣ
- ಆದೇಶನ ಕ್ರಿಯೆ
- . ಸಂಕಲನ ಕ್ರಿಯೆ
- ಅನುರೂಪ ಶ್ರೇಣಿಗಳು
- ಕಾರ್ಬನ್ ಇತರ ಕಾರ್ಬನ್ ಪರಮಾಣುಗಳೊಂದಿಗೆ ಬಂಧಗಳನ್ನೇರ್ಪಡಿಸಿಕೊಂಡು ಬೃಹತ್ ಅಣುಗಳನ್ನು ಉಂಟುಮಾಡುವ ವಿದ್ಯಮಾನ
- ಕೆಟೆನೀಕರಣ.
- ಹೈಡ್ರೋಜನೀಕರಣ
- ಸಾಬೂನೀಕರಣ
- ಮೇಲಿನ ಎಲ್ಲವೂ
- ಸಲ್ಫೋನಿಕ್ ಆಮ್ಲಗಳ ಸೋಡಿಯಂ ಲವಣಗಳಿಗೆ ಸಾಮಾನ್ಯವಾಗಿ ಹೀಗೆನ್ನುವರು
- ಸಾಬೂನುಗಳು
- ಮಾರ್ಜಕಗಳು
- ಎಸ್ಟರ್ ಗಳು
- ಮೇಲಿನ ಯಾವುದೂ ಅಲ್ಲ
- ಕಾರ್ಬನ್ ಅತ್ಯಧಿಕ ಸಂಯುಕ್ತಗಳನ್ನು ಹೊಂದಲು ಕಾರಣ
- ಕೆಟೆನೀಕರಣ
- ಚತುರ್ವೆಲೆನ್ಸಿ
- ಸಮಾಂಗತೆ
- ಮೇಲಿನ ಎಲ್ಲವೂ
- CH3 -CH2 -Br ಈ ಸಂಯುಕ್ತದ ಹೆಸರು
- ಬ್ರೋಮೋಈಥೇನ್
- ಕ್ಲೋರೋ ಈಥೇನ್
- ಬೆಂಜೀನ್
- ಸೈಕ್ಲೋಪ್ರೋಪೇನ್
- ಯಾವ ವಸ್ತುಗಳು ಇತರೆ ವಸ್ತುಗಳಿಗೆ ಆಕ್ಸಿಜನ್ ಸೇರಿಸುವ ಸಾಮರ್ಥ್ಯ ಹೊಂದಿರುವವೋ ಅವುಗಳಿಗೆ ಹೀಗೆನ್ನುವರು
- ಅಪಕರ್ಷಣಕಾರಿಗಳು
- ಉತ್ಕರ್ಷಣಕಾರಿಗಳು
- ಕ್ರಿಯಾವರ್ಧಕಗಳು
- ಯಾವುದೂ ಅಲ್ಲ
- ದ್ರವ ಎಣ್ಣೆಗಳನ್ನು ಪರ್ಯಾಪ್ತಗತ ಘನ ಕೊಬ್ಬುಗಳಾಗಿ ಪರಿವರ್ತಿಸುವ ಪ್ರಕ್ರಿಯೆ ಹೀಗೆನ್ನುವರು.
- ಹೈಡ್ರೋಜನೀಕರಣ
- ಸಾಬೂನೀಕರಣ
- ಕೆಟೆನೀಕರಣ
- ಆದೇಶನ ಕ್ರಿಯೆ
- ಮಾರ್ಜಕಗಳಿಗಿಂತ ಸಾಬೂನುಗಳ ಬಳಕೆ ಉತ್ತಮ. ಏಕೆಂದರೆ,
- ನೀರಿನಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಕುಗ್ಗಿಸುತ್ತವೆ.
- ಜಲಚರ ಜೀವಿಗಳಿಗೆ ಹಾನಿ ಉಂಟುಮಾಡುತ್ತವೆ
- ಜೈವಿಕ ಶಿಥೀಲಿಯವಾಗಿವೆ
- ಮೇಲಿನ ಯಾವುದೂ ಅಲ್ಲ
- ಈ ಕೆಳನಿನವುಗಳಲ್ಲಿ ಅಣುರೂಪ ಶ್ರೇಣಿಯಾಗಿದೆ.
- C2H6, C3H6. C4H10, C5H12
- C2H4, C3H6, C4H8, C5H10
- C2H4, C3H6, C4H8, C5H10
- C2H2, C2H6, C3H6, C4H8
- ಬ್ಯುಟನೋನ್ ನಾಲ್ಕು ಕಾರ್ಬನ್ ಪರಮಾಣು ಹೊಂದಿರುವ ಸಂಯುಕ್ತವಾಗಿದ್ದು , ಇದರಲ್ಲಿನ ಕ್ರಿಯಾಗುಂಪು ಎಂದರೆ,
- ಕಾರ್ಬಾಕ್ಸಿಲಿಕ್ ಗುಂಪು
- ಅಲ್ಡಿಹೈಡ್
- ಕಿಟೋನ್
- ಅಲ್ಕೋಹಾಲ್
- ಪ್ರೋಪೆನಾಲ್ ಮತ್ತು ಪ್ರೋಪೆನ್ಯಾಲ್ ಗಳಲ್ಲಿರುವ ಕ್ರಿಯಾಗುಂಪುಗಳು ಕ್ರಮವಾಗಿ
- - OH & - CHO
- - OH & COOH
- - CHO & -COOH
- -CHO & CO
- CH3CH2COOH ನ ಹೆಸರು
- ಪ್ರೋಪನೋಯಿಕ್ ಆಮ್ಲ
- ಎಥನೋಯಿಕ್ ಆಮ್ಲ
- ಎಥನಾಲ್
- ಪ್ರೋಪೆನಾಲ್
- ಅಲ್ಕೋಹಾಲ್ ಗಳನ್ನು ಕಾರ್ಬಾಕ್ಸಿಲಿಕ್ ಆಮ್ಲಗಳಾಗಿ ಪರಿವರ್ತಿಸಲು ಅವುಗಳನ್ನು ಈ ವಿಧಾನಕ್ಕೆ ಒಳಪಡಿಸಬೇಕು.
- ಅಪಕರ್ಷಣೆ
- ಉತ್ಕರ್ಷಣೆ
- ಮೇಲಿನ ಎರಡೂ ವಿಧಾನಗಳಿಂದ
- ಮೇಲಿನ ಎರಡೂ ತಪ್ಪು
- ಸಾಬೂನು ನೀರು ಮತ್ತು ಜಿಡ್ಡುಗಳೊಂದಿಗೆ ವರ್ತಿಸಿ ಉಂಟಾಗುವ ರಚನೆಗಳಿಗೆ ಹೀಗೆನ್ನುವರು.
- ಸಮಾಂಗಿಗಳು
- ಅನುರೂಪ ಶ್ರೇಣಿಗಳು
- ಮಿಸೆಲ್ ಗಳು
- ಅಯಾನಿಕ್ ಸಂಯುಕ್ತಗಳು
- ಒಂದೇ ರೀತಿಯ ಅಣುಸೂತ್ರ ಆದರೆ ಬೇರೆ ಬೇರೆ ರಚನಾಸೂತ್ರಗಳನ್ನು ಹೊಂದಿರುವ ಸಂಯುಕ್ತಗಳಿಗೆ ಹೀಗೆನ್ನುವರು.
- ಅನುರೂಪ ಶ್ರೇಣಿಗಳು
- ಸಹವೆಲೆನ್ಸಿ ಸಂಯುಕ್ತಗಳು
- ಸಮಾಂಗಿಗಳು
- ಮೇಲಿನ ಎಲ್ಲವೂ
- ಎರಡು ಅನುಕ್ರಮ ಕಾರ್ಬನ್ ಪರಮಾಣುಗಳ ಮಧ್ಯೆ ಕ್ರಮವಾಗಿ ಏಕಬಂಧ ಮತ್ತು ದ್ವಿಬಂಧವನ್ನು ಹೊಂದಿರುವ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ ನ ಸಂಯುಕ್ತ
- ಸೈಕ್ಲೋಹೆಕ್ಸೇನ್
- ಸೈಕ್ಲೋಪ್ರೋಪೇನ್
- ಸೈಕ್ಲೋಪೆಂಟೇನ್
- ಬೆಂಜೀನ್
ಅಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು
ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು
Quiz
- ಹೈಡ್ರೋಕ್ಲೋರಿಕ್ ಆಮ್ಲ ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ವರ್ತಿಸಿದಾಗ
- ದ್ರಾವಣದ ತಾಪ ಹೆಚ್ಚಾಗುತ್ತದೆ.
- ದ್ರಾವಣದ ತಾಪ ಕಡಿಮೆಯಾಗುತ್ತದೆ
- ದ್ರಾವಣದ ತಾಪದಲ್ಲಿ ಯಾವುದೇ ಬದಲಾವಣೆ ಇಲ್ಲ.
- ಸೋಡಿಯಂ ಕ್ಲೋರೈಡ್ ಮತ್ತು ನೀರು ಉಂಟಾಗುತ್ತದೆ.
- ಹಲ್ಲಿನ ಎನಾಮಲ್ ನಲ್ಲಿರುವ ಕ್ಯಾಲ್ಸಿಯಂ ಫಾಸ್ಫೇಟ್ ನ ಗುಣ
- . ಆಮ್ಲೀಯ
- ಪ್ರತ್ಯಾಮ್ಲೀಯ
- ಉಭಯವರ್ತಿ
- ತಟಸ್ಥ
- ಟೂತ್ ಪೇಸ್ಟ್ ಗಳು ಸಾಮಾನ್ಯವಾಗಿ
- ಆಮ್ಲೀಯ .
- ಬಿ. ಪ್ರತ್ಯಾಮ್ಲೀಯ
- ಉಭಯವರ್ತಿ
- ತಟಸ್ಥ
- . ಯಾವ ರಾಸಾಯನಿಕಗಳ ತಯಾರಿಕೆಯಲ್ಲಿ ಸಾಮಾನ್ಯ ಉಪ್ಪನ್ನು ಬಳಸುವರು
1. ವಾಷಿಂಗ್ ಸೋಡಾ 2. ಚೆಲುವೆ ಪುಡಿ 3. ಅಡುಗೆ ಸೋಡಾ 4. ಅರಳಿದ ಸುಣ್ಣ- 1 & 2
- . 1,2,&3
- . 1 & 3
- . 1, 3,& 4
- ಆಹಾರ ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾಗುವ ಆಮ್ಲಗಳ pH ಮೌಲ್ಯ
- 2 ಕ್ಕೆ ಸಮ
- 7 ಕ್ಕೆ ಸಮ
- 7 ಕ್ಕಿಂತ ಕಡಿಮೆ
- 0 ಕ್ಕೆ ಸಮ
- . P, Q, R & S ದ್ರಾವಣಗಳ p H ಮೌಲ್ಯ ಕ್ರಮವಾಗಿ 7.8, 1.0, 13.0 ಮತ್ತು 1.4. ಇವುಗಳಲ್ಲಿ ಹೆಚ್ಚಿನ H+ ಅಯಾನ್ ಗಳ
ಸಾರತೆ ಹೊಂದಿರುವ ದ್ರಾವಣವನ್ನು ತಿಳಿಸಿ.- P
- Q
- R
- S
- ಸೊಂಕು ನಿವಾರಕವಾಗಿ ಬಳಸುವ ಸಂಯುಕ್ತ
- FeSO4 . 7 H2O
- . CaSO4.2H2O
- CuSO4.5H2O
- Ca(OH)2
- ಜಲೀಯ ದ್ರಾವಣದಲ್ಲಿ ಅಪೂರ್ಣವಾಗಿ ವಿಯೋಜನೆ ಹೊಂದುವಸಂಯುಕ್ತಗಳ ಗುಂಪು
- ಹೈಡ್ರೋಕ್ಲೋರಿಕ್ ಆಮ್ಲ & ನೈಟ್ರಿಕ್ ಆಮ್ಲ
- ಕಾರ್ಬೋನಿಕ್ ಆಮ್ಲ & ಫಾಸ್ಪರಿಕ್ ಆಮ್ಲ
- ಹೈಡ್ರೋಕ್ಲೋರಿಕ್ ಆಮ್ಲ & ಫಾಸ್ಪರಿಕ್ ಆಮ್ಲ
- ತಾಮ್ರದ ಸಲ್ಫೇಟ್ & ಸಕ್ಕರೆ ದ್ರಾವಣ
- ಬೇಕಿಂಗ್ ಪೌಡರ್ ನ ಪ್ರಮುಖ ಘಟಕ
- ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
- ಸೋಡಿಯಂ ಕಾರ್ಬೋನೇಟ್
- ಸೋಡಿಯಂ ಕ್ಲೋರೈಡ್
- ಸೋಡಿಯಂ ಹೈಡ್ರಾಕ್ಸೈಡ್
- 10 ml NaOH ದ್ರಾವಣವು 8 ml HCl ದ್ರಾವಣದೊಂದಿಗೆ ಸಂಪೂರ್ಣವಾಗಿ ತಟಸ್ಥೀಕರಣಗೊಳಿಸಲ್ಪಡುತ್ತದೆ.ನಾವು ಇದೇ
ದ್ರಾವಣವನ್ನು 20 ml ನಷ್ಟು ತೆಗೆದುಕೊಂಡರೆ ಇದನ್ನು ತಟಸ್ಥಗೊಳಿಸಬೇಕಾದರೆ ಎಷ್ಟು HCl ದ್ರಾವಣಬೇಕಾಗುತ್ತದೆ.- 4 ml
- 8ml
- 12ml
- 16ml
ಈ ಕೆಳಗಿನ ಯಾವ ಪ್ರಕಾರದ ಔಷದಗಳನ್ನು ಅಜೀರ್ಣತೆಯ ಚಿಕಿತ್ಸೆಗೆ ಬಳಸುವರು- . ಜೀವನಿರೋಧಕ
- ನೋವುನಿರೋಧಕ
- ಆಮ್ಲನಿರೋಧಕ
- ನಂಜುನಿನಾರಕ
- ಜಲೀಯ ದ್ರಾವಣವು ಕೆಂಪು ಲಿಟ್ಮಸ್ ದ್ರಾವಣವನ್ನು ನೀಲಿ ಬಣ್ಣಕ್ಕೆ ತಿರುಗುವಂತೆ ಮಾಡುವ ಬದಲಾವಣೆಯನ್ನು
ಹಿಮ್ಮುಖಗೊಳಿಸಲು ಬಳಸಬೇಕಾದ ರಾಸಾಯನಿಕ ಪದಾರ್ಥ.- . ಅಡುಗೆ ಉಪ್ಪು
- ಅಮೋನಿಯಂ ಹೈಡ್ರಾಕ್ಸೈಡ್
- ಸುಣ್ಣ
- ಹೈಡ್ರೋಕ್ಲೋರಿಕ್ ಆಮ್ಲ
- ಒಂದು ದ್ರಾವಣ ಪುಡಿಮಾಡಿದ ಮೊಟ್ಟೆಯ ಚೂರುಗಳೊಂದಿಗೆ ಬಿಡುಗಡೆಮಾಡುವ ಅನಿಲ ಸುಣ್ಣದ ತಿಳಿನೀರನ್ನು
ಬಿಳಿಯಾಗಿಸುತ್ತದೆ. ಆ ದ್ರಾವಣವು ಇದನ್ನು ಒಳಗೊಂಡಿದೆ.- . NaCl
- HCl
- . LiCl
- KCl
- ಸೋಡಾ ಆಸಿಡ್ ಮಾದರಿಯ ಅಗ್ನಿಶಾಮಕಗಳ ತಯಾರಿಕೆಯಲ್ಲಿ ಬಳಸುವ ಸಂಯುಕ್ತ.
- ಅಡುಗೆಸೋಡಾ
- ವಾಷಿಂಗ್ ಸೋಡಾ
- ಚೆಲುವೆ ಪುಡಿ
- ಅಡುಗೆ ಉಪ್ಪು
- ಒಬ್ಬ ಹಾಲು ಮಾರುವವನು ತಾಜಾ ಹಾಲಿಗೆ ಅತ್ಯಲ್ಪಪ್ರಮಾಣದ ಅಡುಗೆ ಸೋಡಾ ಸೇರಿಸುತ್ತಾನೆ, ಏಕೆಂದರೆ,
- ಹಾಲನ್ನು ಆಮ್ಲೀಯಗೊಳಿಸಲು
- ಹಾಲನ್ನು ಕ್ಷಾರೀಯಗೊಳಿಸಲು
- ಹಾಲನ್ನು ಮೊಸರು ಮಾಡಲು
- ಹಾಲು & ನೀರನ್ನು ಬೇರ್ಪಡಿಸಲು.
- ಇರುವೆ ಕಡಿತದಲ್ಲಿರುವ ಆಮ್ಲ
- ಮೆಥನೋಯೊಕ್ ಆಮ್ಲ
- ಲ್ಯಾಕ್ಟಿಕ್ ಆಮ್ಲ
- ಸಿಟ್ರಿಕ್ ಆಮ್ಲ
- ಇಥನೋಯಿಕ್ ಆಮ್ಲ
- ಗಡಸು ನೀರನ್ನು ಮೆದುಗೊಳಿಸಲು ಬಳಸುವ ಸೋಡಿಯಂನ ಸಂಯುಕ್ತ
- ಸೋಡಿಯಂ ಕ್ಲೋರೈಡ್
- ಸೋಡಿಯಂ ಕಾರ್ಬೋನೇಟ್
- ಸೋಡಿಯಂ ಹೈಡ್ರಾಕ್ಸೈಡ್
- ಸೋಡಿಯಂ ಬೈ ಕಾರ್ಬೋನೇಟ್
- 'A' ಪ್ರನಾಳದಲ್ಲಿ ವಿನೇಗರ್ 'B' ಪ್ರನಾಳದಲ್ಲಿ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ " C' ಪ್ರನಾಳದಲ್ಲಿ ನಿಂಬೆರಸ ಹಾಗೂ 'D' ಪ್ರನಾಳದಲ್ಲಿ ಕ್ಯಾಲ್ಸಿಯಂ ಬೈ ಕಾರ್ಬೋನೇಟ್ ಹೊಂದಿರುವ ಪ್ರನಾಳಗಳಿಗೆ ಒಂದು ತುಂಡು, ನೀಲಿ ಲಿಟ್ಮಸ್ ಕಾಗದವನ್ನು ಹಾಕಿದಾಗ ಆಗುವ ಬದಲಾವಣೆ
- A- ನೀಲಿ B- ಕೆಂಪು C- ಕೆಂಪು D--ನೀಲಿ
- A- ಕೆಂಪು B- ನೀಲಿ C- ಕೆಂಪು D--ನೀಲಿ
- A- ಕೆಂಪು B- ನೀಲಿ C- ಬದಲಾವಣೆ ಇಲ್ಲ D--ನೀಲಿ
- A- ನೀಲಿ B- ಕೆಂಪು C- ನೀಲಿ D-- ಕೆಂಪು
- ಕುಡಿಯುವ ನೀರಿನ ಶುದ್ಧೀಕರಣದಲ್ಲಿ ಸೋಕು ನಿವಾರಕವಾಗಿ ಬಳಸುವ ಸಂಯುಕ್ತ
- ಚೆಲುವೆ ಪುಡಿ ( ಕ್ಯಾಲ್ಸಿಯಂ ಆಕ್ಸಿ ಕ್ಲೋರೈಡ್ )
- ವಾಷಿಂಗ್ ಸೋಡಾ
- ಅಡುಗೆ ಸೋಡಾ
- ಅಡುಗೆ ಉಪ್ಪು
- ಆಮ್ಲೀಯ ಆಕ್ಸೈಡ್ ನ್ನು ಉಂಟುಮಾಡುವ ಧಾತು
- Mg
- Na
- Al
- P
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)